BDA ಅಪಾರ್ಟ್‌ಮೆಂಟ್‌ಗಳ ಮಾಲೀಕರಿಗೆ ತಮ್ಮ ಹೆಸರಿಗೆ ಹಂಚಿಕೆಯಾಗಿರುವ ಪಾರ್ಕಿಂಗ್ ಸ್ಥಳವನ್ನು ಅಧಿಕೃತವಾಗಿ ನೋಂದಾಯಿಸಿಕೊಳ್ಳುವುದು ಬಹಳ ದಿನಗಳಿಂದ ಬಾಕಿ ಉಳಿದಿರುವ ವಿಷಯವಾಗಿತ್ತು. ಪಾರ್ಕಿಂಗ್ ಅಲಾಟ್‌ಮೆಂಟ್ ಲೆಟರ್ ಪಡೆದಿದ್ದರೂ, ನೋಂದಣಿ ಪೂರ್ಣಗೊಳಿಸಲು ಸಾಧ್ಯವಾಗದೆ ಅನೇಕ ಮಾಲೀಕರು ಕಾಯುತ್ತಿದ್ದರು.
ಇದೀಗ BDA ಈ ಪ್ರಕ್ರಿಯೆಯನ್ನು ಆರಂಭಿಸಿದ್ದು, ಪಾರ್ಕಿಂಗ್ ಸ್ಥಳದ ನೋಂದಣಿಗೆ ಅಗತ್ಯವಿರುವ Rectification Deed ಅನ್ನು ಮಾಡಿಕೊಡುವ ಪ್ರಕ್ರಿಯೆ ನಡೆಯುತ್ತಿದೆ.
BDA ನೀಡಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಮಾಲೀಕರಿಗೆ Parking Allotment Letter ನೀಡಲಾಗಿದ್ದರೆ, ಮೊದಲು ತಮ್ಮ e-Khataಯಲ್ಲಿ ಪಾರ್ಕಿಂಗ್ ವಿವರಗಳನ್ನು ನಮೂದಿಸಬೇಕು. e-Khataಯಲ್ಲಿ ಅಗತ್ಯ ಬದಲಾವಣೆ ಮಾಡಿದ ನಂತರ, BDA ನೀಡಿರುವ Parking Allotment Letter ಆಧಾರದ ಮೇಲೆ BDA Rectification Deed ಮಾಡಿಕೊಡಲಿದೆ. ಇದರ ಆಧಾರದ ಮೇಲೆ ಮಾಲೀಕರು ಪಾರ್ಕಿಂಗ್ ಸ್ಥಳದ ನೋಂದಣಿಯನ್ನು ಪೂರ್ಣಗೊಳಿಸಬಹುದು.
ಅಗತ್ಯವಿರುವ ದಾಖಲೆಗಳು
- ಪಾರ್ಕಿಂಗ್ ನೋಂದಣಿಗಾಗಿ BDAಗೆ ಮನವಿ ಪತ್ರ
- ಫ್ಲ್ಯಾಟ್ ಹಂಚಿಕೆ ಪತ್ರ
- ಸ್ವಾಧೀನ ಪ್ರಮಾಣಪತ್ರ
- ಪಾರ್ಕಿಂಗ್ ವಿವರಗಳನ್ನು ಒಳಗೊಂಡಿರುವ ಇ-ಖಾತಾ
- ಕಾರ್ ಪಾರ್ಕಿಂಗ್‌ಗಾಗಿ ಪಾವತಿಸಿದ ಬ್ಯಾಂಕ್ ಚಲನ್/ರಸೀದಿ
- ಬಿಡಿಎ (BDA) ಯಿಂದ ನೀಡಲಾದ ವಾಹನ ನಿಲುಗಡೆ ಸ್ಥಳ ಹಂಚಿಕೆ ಪತ್ರ
- ಹಂಚಿಕೆದಾರರು/ಮಾಲೀಕರ ಆಧಾರ್ ಕಾರ್ಡ್
- ನಾಲ್ಕು ಪಾಸ್‌ಪೋರ್ಟ್ ಅಳತೆಯ ಛಾಯಾಚಿತ್ರಗಳು
- ಮಾರಾಟ ಪತ್ರದ ಪ್ರತಿ
- ಇತ್ತೀಚಿನ ಋಣಭಾರ ಪ್ರಮಾಣ ಪತ್ರ
ಮೇಲಿನ ದಾಖಲೆಗಳನ್ನು ಫ್ಲಾಟ್ ಹಂಚಿಕೆ ವಿಭಾಗದ ಕೇಸ್ ವರ್ಕರ್ ಅವರಿಗೆ ಸಲ್ಲಿಸಬೇಕು.
ಸೂಚನೆ: ಬಿಡಿಎ (BDA) ಅಥವಾ ಉಪ-ನೋಂದಣಾಧಿಕಾರಿಯವರು ನಿಗದಿಪಡಿಸಿದ ಶುಲ್ಕಗಳನ್ನು ಸಂಬಂಧಪಟ್ಟ ಮಾಲೀಕರೇ ಭರಿಸಬೇಕು.
